ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆ ಬುಧವಾರ ಬೆಳಗ್ಗೆ ಹರಿಯಾಣ ಪ್ರವೇಶಿಸಿತು. ರಾಜಸ್ಥಾನ ಗಡಿಯಲ್ಲಿರುವ ನುಹ್ಹ್ ಬಳಿ ಪಾದಯಾತ್ರೆ ಹರಿಯಾಣ ಪ್ರವೇಶಿಸಿತು. ಈ ವೇಳೆ ಹರಿಯಾಣದ ಕಾಂಗ್ರೆಸ್ ನಾಯಕರು ಸ್ಥಳದಲ್ಲಿ ಹಾಜರಿದ್ದು ಪಾದಯಾತ್ರೆ ಹಾಗೂ ರಾಹುಲ್ ಗಾಂಧಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಹರಿಯಾಣದ ಮಾಜಿ ಸಿಎಂ ಭೂಪೇಂದ್ರ ಸಿಂಗ್ಹೂಡಾ, ರಣ್ದೀಪ್ ಸಿಂಗ್ ಸುರ್ಜೆವಾಲಾ, ದೀಪೇಂದ್ರ ಸಿಂಗ್ಹೂಡಾ, ಹರಿಯಾಣ ಕಾಂಗ್ರೆಸ್ ಮುಖ್ಯಸ್ಥ ಉದಯ್ ಬಾನ್ ಹಾಜರಿದ್ದರು.