ತುಮಕೂರು ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ವಿಷಯದಲ್ಲಿ ರಾಜಕೀಯ ಮುಖಂಡರ ಹೇಳಿಕೆಗೆ ಆಕ್ಷೇಪ ವ್ಯಕ್ತವಾಗುತ್ತಿದೆ.ಪ್ರಶಸ್ತಿಯ ಹೆಸರಲ್ಲಿ ರಾಜಕೀಯ ಮುಖಂಡರಿಂದ ಪರ-ವಿರುದ್ಧದ ಹೇಳಿಕೆಗಳು ಹೊರಬರುತ್ತಿದ್ದು, ಕೂಡಲೇ ಅವನ್ನು ನಿಲ್ಲಿಸಬೇಕು. ಈ ಹೇಳಿಕೆಗಳಿಂದ ಶ್ರೀಮಠದ ಭಕ್ತರು ಮತ್ತು ವಿದ್ಯಾರ್ಥಿಗಳಿಗೆ ಘಾಸಿಯಾಗುತ್ತಿದೆ. ಹೀಗಂತ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಅಸಮಾಧಾನ ವ್ಯಕ್ತಪಡಿಸಲಾಗಿದೆ.ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಠದ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು, ಪ್ರಶಸ್ತಿ ವಿಷಯದಲ್ಲಿ ಹೇಳಿಕೆ ನಿಲ್ಲಿಸಬೇಕು. ಹೀಗಂತ ಹಳೆಯ ವಿದ್ಯಾರ್ಥಿಗಳು