ಬೆಂಗಳೂರು: ಮೃತ ಯುವಕ ಅಜಯ್ (26) ಮದ್ಯ ವ್ಯಸನಿಯಾಗಿದ್ದ. ಈತನ ಮೇಲೆ ಹಲಸೂರು ಹಾಗೂ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಹಲವು ಅಪರಾಧ ಪ್ರಕರಣಗಳು ದಾಖಲಾಗಿತ್ತು. ದೊಡ್ಡ ಬಾಣಸವಾಡಿಯಲ್ಲಿರುವ ಅಕ್ಕನ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಅಜಯ್ , ಕುಡಿತಕ್ಕೆ ಹಣ ನೀಡುವಂತೆ ಪೀಡಿಸುತ್ತಿದ್ದ. ಹಣ ನೀಡದಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೀದಿಯಲ್ಲಿ ರಂಪಾಟ ಎಸೆಗೆ ಅವರ ಮರ್ಯಾದೆ ತೆಗೆಯುತ್ತಿದ್ದ. ಇದರಿಂದ ಬೇಸತ್ತಿದ್ದ ಅಜಯ್ ಸೋದರಿ ಆತನಿಗೆ ಮನೆಗೆ ಬರಬೇಡ ಎಂದು