ಶಾಸಕರೊಬ್ರು ಕೆಲವು ವಿಷಯಗಳಲ್ಲಿ ರೇವಣ್ಣ ಅವರನ್ನು ತಳ್ಳಿ ಹಾಕ್ತಾರೆ. ಎಲ್ಲವನ್ನೂ ನಾನೇ ಕಟ್ಟಿದೆ, ಎಲ್ಲವನ್ನೂ ನಾನೇ ಮಾಡ್ದೆ ಅಂತ ಕೊಚ್ಚಿಕೊಳ್ತಾರೆ. ಅವರು ವಿದ್ಯಾವಂತರೋ, ಅವಿದ್ಯಾವಂತರೋ ಗೊತ್ತಿಲ್ಲ ಎಂದು ಶಾಸಕ ಪ್ರೀತಂಗೌಡ ವಿರುದ್ಧ ಭವಾನಿ ರೇವಣ್ಣ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ರು. ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ನಡೆದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಪ್ರೀತಂಗೌಡ ವಿರುದ್ಧ ಭವಾನಿ ರೇವಣ್ಣ ಹರಿಹಾಯ್ದಿದ್ದಾರೆ. ರೋಡ್ನಲ್ಲಿ ಹೋಗುವ ಪ್ರತಿಯೊಬ್ಬರಿಗೂ ಗೊತ್ತು ಅಭಿವೃದ್ಧಿ ಕಾರ್ಯ ರೇವಣ್ಣರಿಂದ ಆಗಿದ್ದು ಅಂತ.