ಸನಾತನ ಸಂಸ್ಕೃತಿಯಲ್ಲಿ ದೇವರ ಮೊರೆ ಹೋಗಲು ನಮ್ಮ ಪೂರ್ವಜರು ಹಲವಾರು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ದೇವರ ಪೂಜೆ ಮಾಡುವುದು, ಭಜನೆ ಮಾಡುವುದು, ವ್ರತಗಳನ್ನು ಆಚರಿಸುವುದು, ಹೋಮ-ಹವನವನ್ನು ಮಾಡುವುದು, ಯಜ್ಞ-ಯಾಗಾದಿಗಳನ್ನು ಮಾಡುವುದು, ದಾನವನ್ನು ಮಾಡುವುದಂತಹ ಹಲವಾರು ಮಾರ್ಗಗಳನ್ನು ಈಗಿನ ನಮ್ಮ ಜೀವನದಲ್ಲಿ ನೋಡಬಹುದು.ಆಷಾಢ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಭೀಮನ ಅಮಾವಾಸ್ಯೆ ಎಂಬ ವ್ರತವನ್ನು ಆಚರಿಸುತ್ತೇವೆ. ಈ ವ್ರತದ ಉದ್ದೇಶ ಒಂದೇ ಆದರೂ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಬೇರೆ ಬೇರೆ ಹೆಸರಿನಲ್ಲಿ ಕರೆಯಲಾಗುತ್ತದೆ. ಭಾರತದ