ಆತ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್..ಕೈ ತುಂಬಾ ಸಂಬಳ. ಸುಲಭವಾಗಿ ಲೈಫ್ ಸೆಟಲ್ ಮಾಡಿಕೊಳ್ಳುವ ದಾರಿ ಆತನ ಮುಂದಿತ್ತು. ಹಣದ ಹಿಂದೆ ಬಿದ್ದ ಟೆಕ್ಕಿ ಮಹಿಳೆ ಹೆಸರಿನಲ್ಲಿ ನಕಲಿ ಇನ್ ಸ್ಟ್ರಾಗ್ರಾಮ್ ಖಾತೆಗಳನ್ನು ಸೃಷ್ಟಿಸಿ ಕೆಲಸ ಕೊಡಿಸುವುದಾಗಿ ಪುಸಲಾಯಿಸಿ ಮಹಿಳೆಯರನ್ನು ಲೈಂಗಿಕ ಜಾಲಕ್ಕೆ ನೂಕಿದ್ದ ಆರೋಪಿಯನ್ನು ನಗರ ಆಗ್ನೇಯ ವಿಭಾಗದ ಸೆನ್ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ದಿಲ್ಲಿಪ್ರಸಾದ್ ಬಂಧಿತನಾಗಿದ್ದು ಕೋರಮಂಗಲದಲ್ಲಿ ವಾಸವಾಗಿದ್ದ. ಖಾಸಗಿ ಕಂಪೆನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ.