ಸೇದುವುದಕ್ಕೆ ಸಿಗರೇಟ್ ಕೊಡಲಿಲ್ಲ ಅನ್ನೋ ಒಂದೇ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ತರಕಾರಿ ವ್ಯಾಪಾರಿಯಾಗಿದ್ದ ಅರವಿಂದ (37) ಕೊಲೆಯಾದ ವ್ಯಕ್ತಿಯಾಗಿದ್ದರೆ, ಕೊಲೆ ಮಾಡಿದ ಆರೋಪಿಗಳಿಬ್ಬರು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳಿಬ್ಬರು ಸಿಗರೇಟ್ ಸೇದುತ್ತಾ ನಿಂತಿದ್ದ ಅವರಿಂದನ ಹತ್ತಿರ ಸಿಗರೇಟ್ ಕೇಳಿದ್ದಾರೆ. ಆತ ಕೊಡಲ್ಲ ಅಂದಿದ್ದಕ್ಕೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಮಹಾರಾಷ್ಟ್ರದ ಕಲ್ಯಾಣ್ ಪ್ರದೇಶದಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.