ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಸಿದ್ದಗಂಗಾ ಶ್ರೀಗಳ ಕುರಿತಾಗಿ ಸಿನಿ ಸೀರಿಸ್ ಸಿದ್ಧವಾಗುತ್ತಿದೆ. 52 ಕಂತುಗಳ ಮೆಗಾ ಸೀರಿಸ್ ಇದಾಗಿದ್ದು, ಹಂಸಲೇಖ ಅವರ ಸಾರಥ್ಯದಲ್ಲಿ ಮೂಡಿ ಬರಲಿದೆ. ಸಿದ್ದಗಂಗಾ ಶ್ರೀಗಳ 115ನೇ ಜಯಂತೋತ್ಸವದ ಪ್ರಯುಕ್ತ ಈ ಸೀರಿಸ್ ಸಿದ್ಧವಾಗುತ್ತಿದ್ದು, ಶ್ರೀಗಳ ಪಾತ್ರಕ್ಕಾಗಿ ಅಮಿತಾಭ್ ಬಚ್ಚನ್ ಅವರನ್ನು ಕೇಳಲಾಗಿದೆಯಂತೆ. ಆದರೆ ಇನ್ನೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸಂಗೀತ ಬ್ರಹ್ಮ ಹಂಸಲೇಖ ತಿಳಿಸಿದ್ದಾರೆ. ಶ್ರೀಗಳ ಜೀವನ ಚರಿತ್ರೆಯನ್ನು