ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಜನಾರ್ಧನ ರೆಡ್ಡಿಯವರನ್ನು ಹೊರತರಲು ನ್ಯಾಯಮೂರ್ತಿ ಸಿಜೆಐ ಬಾಲಕೃಷ್ಣನ್ ಸಂಬಂಧಿಕರಿಗೆ ಭಾರೀ ಮೊತ್ತದ ಹಣ ಆಮಿಷ ಒಡ್ಡಲಾಗಿತ್ತಾ?ಹೀಗೊಂದು ದೇಶವೇ ಬೆಚ್ಚಿ ಬೀಳುವಂತಹ ಹಗರಣವೊಂದು ಬೆಳಕಿಗೆ ಬಂದಿದೆ. ಜನಾರ್ಧನ ರೆಡ್ಡಿ ಬಿಡುಗಡೆಗೆ ಅವರ ಸ್ನೇಹಿತ ಬಾದಾಮಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಮತ್ತು ರೆಡ್ಡಿ ಪರ ವಕೀಲರು ನ್ಯಾಯಮೂರ್ತಿ ಬಾಲಕೃಷ್ಣ ಅವರ ಅಳಿಯ ಶ್ರೀನಿಜಿ ಜತೆಗೆ 160 ಕೋಟಿ ರೂ.ಗಳ ಡೀಲ್ ಕುದುರಿಸಿದ್ದರು ಎಂಬ