ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ನಡೆಯುತ್ತಿದೆ ಮತ್ತು ಶಶಿಕಲಾ ನಟರಾಜನ್ ರಿಂದ ಲಂಚ ಪಡೆದಿದ್ದಾರೆಂದು ಕಾರಾಗೃಹ ಇಲಾಖೆ ಡಿಜಿಪಿ ವಿರುದ್ಧ ಆರೋಪ ಮಾಡಿ ವರದಿ ನೀಡಿದ್ದ ಐಪಿಎಸ್ ಅಧಿಕಾರಿ ಡಿ.ರೂಪಾಗೆ ಸಂಕಷ್ಟ ಎದುರಾಗಿದೆ.ಇನ್ನು ನಾಲ್ಕು ದಿನಗಳಲ್ಲಿ ನಿವೃತ್ತರಾಗಲಿರುವ ಡಿಜಿಪಿ ಸತ್ಯನಾರಾಯಣ ರಾವ್ ರೂಪಾ ಬೇಷರತ್ ಕ್ಷಮೆಗೆ ಆಗ್ರಹಿಸಿದ್ದು, ತಪ್ಪಿದಲ್ಲಿ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ. ಇನ್ನೊಂದೆಡೆ ಶಶಿಕಲಾ ನಟರಾಜನ್ ಗೆ ನೀಡುತ್ತಿದ್ದ ವಿಐಪಿ ಸೌಲಭ್ಯ