ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿ ಹಿನ್ನಲೆ ಅಮಾಯಕನೊಬ್ಬ ಜೀವ ಕಳೆದುಕೊಂಡಿದ್ದಾನೆ. ಬೈಕ್ ಮುಗುಚಿ ಆಳ ತಗ್ಗಿಗೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ.ಬೈಕ್ ಮುಗುಚಿ ಬೃಹತ್ ತಗ್ಗಿಗೆ ಬಿದ್ದ ಪರಿಣಾಮ ಸವಾರ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಿಕ್ಕಮಾಗನೂರು ಬಳಿ ಘಟನೆ ನಡೆದಿದೆ. ಜಮಾಲಸಾಬ್ ಮುಜಾವರ್ (50)ಮೃತ ದುರ್ದೈವಿ.ಮೃತನು ದಾವಣಗೇರಿ ಜಿಲ್ಲೆಯ ಹೊನ್ನಳ್ಳಿ ತಾಲೂಕಿನ ನಿವಾಸಿಯಾಗಿದ್ದಾನೆ. ಅಪ್ಪರ್ ತುಂಗಾ ಕಾಲವೆಗಾಗಿ ಗುಂಡಿ ತೊಡಿದ್ದ ಅಧಿಕಾರಿಗಳ ಕ್ರಮದಿಂದಾಗಿ ಸಾವನ್ನಪ್ಪುವಂತಾಗಿದೆ ಎಂದು ಜನರು ದೂರಿದ್ದಾರೆ. ಯುಟಿಪಿ