ಮಳೆ ಕೊರತೆಯಿಂದ ಸೃಷ್ಟಿಯಾದ ಬರ ಒಂದೆಡೆಯಾದರೆ, ಅವಧಿಗೂ ಮುನ್ನವೇ ಬಿಸಿಲಿನ ಬೇಗೆ ಆವರಿಸಿದ್ದರಿಂದ ವಿದ್ಯುತ್ ಬಳಕೆ ಹೆಚ್ಚಾಗಿ ಗೃಹ ಜ್ಯೋತಿ ಫಲಾನುಭವಿಗಳಿಗೆ ಅಕ್ಟೋಬರ್ ತಿಂಗಳ ವಿದ್ಯುತ್ ಬಿಲ್ ತುಸು ಹೊರೆಯಾಗಿದೆ. ನೀರಿದ್ದರೂ ಹೊಲಕ್ಕೆ ಹರಿಸಲು ಸಮರ್ಪಕ ವಿದ್ಯುತ್ ಸಿಗುತ್ತಿಲ್ಲ ಕೆಲವೆಡೆ ಲೋಡ್ಶೆಡ್ಡಿಂಗ್ ಕಿರಿಕಿರಿ ಇಷ್ಟೆಲ್ಲ ಗೋಳಿನ ಮಧ್ಯೆ ಸೆಕೆ ತಡೆಯಲು ಅರಿವಿಲ್ಲದೆ ಅತಿಯಾಗಿ ವಿದ್ಯುತ್ ಬಳಸಿಕೊಂಡವರಿಗೆ ಹೆಚ್ಚುವರಿ ಹಣ ಪಾವತಿಸುವ ಬಿಲ್ ರವಾನೆಯಾಗುತ್ತಿದೆ. ಹಿಂದಿನ ತಿಂಗಳು ಗೃಹ ಜ್ಯೋತಿ ಗ್ಯಾರಂಟಿಯಿಂದ