ಅಲ್ಲಿ ಅಬ್ಬರದ ಸಂಗೀತ ಮನೆಮಾಡಿತ್ತು. ತಾಳಕ್ಕೆ ತಕ್ಕಂತೆ ನೂರಾರು ಯುವತಿಯರು ಕುಣಿದು ಕುಪ್ಪಳಿಸಿದರು. ವಿದ್ಯಾರ್ಥಿನಿಯರ ಡ್ಯಾನ್ಸ್ ಗೆ ಉಪನ್ಯಾಸಕಿಯರೂ ಸಾಥ್ ನೀಡಿದರು. ನವರಾತ್ರಿ ಅಂಗವಾಗಿ ನಡೆದ ಕಲರ್ ಫುಲ್ ದಾಂಡಿಯಾ ನೋಡುಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುವಲ್ಲಿ ಯಶಸ್ವಿಯಾಯಿತು.ನವರಾತ್ರಿ ಸಡಗರ ಎಲ್ಲೆಡೆ ಮನೆಮಾಡಿದ್ದರೆ ಬಿಸಿಲು ನಗರಿ ಖ್ಯಾತಿಯ ಕಲಬುರಗಿಯಲ್ಲಿ ವಿಭಿನ್ನವಾಗಿಯೇ ಹಬ್ಬದ ಸಡಗರವನ್ನು ಆಚರಣೆ ಮಾಡಲಾಗುತ್ತಿದೆ. ಹೈದ್ರಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿನ ಎಲ್ಲಾ ಮಹಿಳಾ ಕಾಲೇಜುಗಳ ವಿದ್ಯಾರ್ಥಿನಿಯರು ಭಿನ್ನವಾಗಿಯೇ ನವರಾತ್ರಿ