ಮಠಗಳಿಗೆ ಅನದಾನ ನೀಡಲು ಸರ್ಕಾರಕ್ಕೆ 30% ಕಮಿಷನ್ ನೀಡಬೇಕು ಅನ್ನೋ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಬೈರತಿ ಬಸವರಾಜ್ ಮಾತನಾಡಿದ್ದಾರೆ. ಪರಮ ಪೂಜ್ಯರಾದವರು ಈ ರೀತಿ ಮಾತನಾಡಬಾರದು. ಸ್ವಾಮೀಜಿಗಳ ಹೇಳಿಕೆ ಶೋಭೆ ತರವಂತದ್ದಲ್ಲ. ಸ್ವಾಮೀಜಿಗಳು ಎಲ್ಲಿ ಕೊಟ್ಟಿದ್ದಾರೆ-ಯಾರಿಗೆ ಕೊಟ್ಟಿದ್ದಾರೆ ಅನ್ನೋದನ್ನ ಹೇಳಲಿ. ಎಲ್ಲ ಪೀಠಾಧಿಪತಿಗಳು ಸುಮ್ಮನಿದ್ದಾರೆ. ಆದರೆ ಇವರು ಮಾತ್ರ ಈ ರೀತಿ ಹೇಳ್ತಾ ಇದ್ದು, ಇವರ ಬಾಯಿಯಿಂದ ಹೇಳಿಸುವಂತ ಕೆಲಸವಾಗ್ತಿದೆ. ಸ್ವಾಮೀಜಿಗಳು ಈ ರೀತಿ ಮಾತನಾಡುವಂತೆ ಕಾಂಗ್ರೆಸ್ನವರು ಪ್ರೇರೇಪಿಸುತ್ತಿದ್ದಾರೆ