Widgets Magazine

ಆರೋಗ್ಯ ಕವಚ 108 ರಲ್ಲೇ ಮಗುವಿಗೆ ಜನ್ಮ

ರಾಯಚೂರು| Jagadeesh| Last Modified ಶನಿವಾರ, 7 ಸೆಪ್ಟಂಬರ್ 2019 (17:18 IST)
ಆರೋಗ್ಯ ಕವಚ ರಲ್ಲೇ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಗೋನ್ವಾರ ಗ್ರಾಮದ ದೇವಮ್ಮ ಮಗುವಿಗೆ ಜನ್ಮ ನೀಡಿದ ಮಹಿಳೆಯಾಗಿದ್ದಾರೆ.

ಹೆರಿಗೆ ನೋವು ಕಾಣಿಸಿಕೊಂಡಿದ್ರಿಂದ 108 ಅಂಬುಲೆನ್ಸ್ ನಲ್ಲಿ ಸಿಂಧನೂರು ತಾಲೂಕಾಸ್ಪತ್ರೆಗೆ ಕರೆತರಲಾಗ್ತಿತ್ತು. ಆದರೆ ಮಾರ್ಗ ನಡುವೆಯೇ ಹೆರಿಗೆ ನೋವು ಕಾಣಿಕೊಂಡಿದೆ.

ಇಎಂಟಿ ಗುಂಡಪ್ಪ ಹಾಗೂ ಪೈಲಟ್ ಲಕ್ಷ್ಮಣ ಮತ್ತು ಆಶಾ ಕಾರ್ಯಕರ್ತೆ ಶಾರದಾ ಸಹಾಯದಿಂದ ಸುರಕ್ಷಿತವಾಗಿ ಹೆರಿಗೆಯಾಗಿದೆ.

ತಾಯಿ, ಮಗು ಆರೋಗ್ಯದಿಂದಿದ್ದು, ಸಿಂಧನೂರು ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.


 
 
ಇದರಲ್ಲಿ ಇನ್ನಷ್ಟು ಓದಿ :