ಪಕ್ಷದ ಅಧ್ಯಕ್ಷರ ಸೂಚನೆ ಮೆರೆಗೆ ನಾನು ರಾಜಿನಾಮೇ ನೀಡಿದ್ದೇನೆ.. ಪಕ್ಷ ನನಗೆ ಎಲ್ಲವನ್ನೂ ನೀಡಿದೆ.. ನಾನು ಸಂತೋಷದಿಂದ ಇದ್ದೇನೆ ಅಂತಾ ಕೇಂದ್ರ ನಿರ್ಗಮಿತ ಸಚಿವ ಡಿವಿ ಸದಾನಂದ ಗೌಡ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿ ಸ್ಪಷ್ಟಪಡಿಸಿದರು.. ಈ ವೇಳೆ ಮಾತನಾಡಿದ ಡಿವಿಎಸ್ ಅಧಿಕಾರ ಸಿಕ್ಕಾಗ ಮಾತ್ರವಲ್ಲ ಕಳೆದುಕೊಂಡಾಗಲು ಜನ ನನ್ನೊಂದಿಗೆ ಇದ್ದಾರೆ.. ಜನರ ಪ್ರೀತಿಗೆ ನಾನು ಚಿರರುಣಿ ಎಂದರು. ರಾಜ್ಯ ರಾಜಕಾರಣದ ಬಗ್ಗೆ ಈಗಲೆ ನಾನು ಏನು ಹೇಳಲಾಗುವುದಿಲ್ಲ.. ಪಕ್ಷ ನೀಡುವ ಜವಬ್ದಾರಿ ಮತ್ತು ಸೂಚನೆ ಮೆರೆಗೆ ಕೆಲಸ ಮಾಡ್ತೀನಿ ಎಂದು ಹೇಳುವ ಮೂಲಕ ಮುಂದಿನ ರಾಜಕೀಯ ನಡೆಯ ಬಗ್ಗೆಯೂ ಕುತೂಹಲ ಮೂಡಿಸಿದರೂ.. ಇನ್ನೂ ಸದಾನಂದಗೌಡ ಆಗಮನದ ಹಿನ್ನಲೆ ಏರ್ಪೊಟ್ ಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವಿಧಾನಸಭೆಗಳಿಂದ ಸಾವಿರಾರು ಜನ ಡಿವಿಎಸ್ ಬೆಂಬಲಿಗರು, ಮುಖಂಡರು ಆಗಮಿಸಿ ಡಿವಿಎಸ್ ಗೆ ಆತ್ಮಸ್ಥೆರ್ಯ ತುಂಬುವ ಕೆಲಸ ಮಾಡಿದರು..ಜತೆಗೆ ವಿಮಾನ ನಿಲ್ದಾಣದಲ್ಲಿ ಕ್ಕಿಕ್ಕಿರಿದು ತುಂಬಿದ್ದ ಡಿವಿಎಸ್ ಬೆಂಬಲಿಗರು ಮುಂದಿನ ಸಿಎಂ ಸದಾನಂದಗೌಡ ಎಂಬುದನ್ನು ಸೂಚಿಸುವಂತಿತ್ತು.