ಬಿಜೆಪಿಯವರು ಮೀಸಲಾತಿ ವಿರೋಧಿಗಳು. ಸುಪ್ರೀಂಕೋರ್ಟ್ನಲ್ಲಿ ಮೀಸಲಾತಿ ರದ್ದುಗೊಳಿಸಿ ಎಂದು ಅರ್ಜಿ ಸಲ್ಲಿಸಿದ ರಾಮಾಜೋಯಿಸ್ ಇವರ ರಾಜಗುರುಗಳು ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ನಗರದ ಟೌನ್ಹಾಲ್ನಲ್ಲಿ ದಿವಂಗತ ಮುಖ್ಯಮಂತ್ರಿ ದೇವರಾಜ್ ಅರಸು ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಹಾರ್ ಚುನಾವಣೆ ಸಂದರ್ಭದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡಾ ಮೀಸಲಾತಿ ರದ್ದುಗೊಳಿಸುವಂತೆ ಒತ್ತಡ ಹೇರಿದ್ದರು ಎಂದು ಗುಡುಗಿದ್ದಾರೆ. ಅಮಿತ್ ಶಾ ನಾವು ಮೀಸಲಾತಿ ವಿರೋದಿಗಳು ಎಂದಿದ್ದಾರೆ.