ಬೆಂಗಳೂರು: ಬಿಜೆಪಿಯ ಮಹಾತ್ವಾಕಾಂಕ್ಷಿ ಪರಿವರ್ತನಾ ಯಾತ್ರೆ ಆರಂಭಕ್ಕೆ ನೆಲಮಂಗಲ ಮಾದವಾರ ಬಿಐಇಸಿ ಮೈದಾನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 17 ಜಿಲ್ಲೆಗಳ 27 ಸಾವಿರ ಬೂತ್ ಗಳಿಂದ ಬೈಕ್ ಮೂಲಕ ಕಾರ್ಯಕರ್ತರು ಆಗಮಿಸಲಿದ್ದಾರೆ. 11.30ಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಗಮಿಸಲಿದ್ದು, ಮಾಜಿ ಡಿಸಿಎಂ ಆರ್. ಅಶೋಕ್ ಗೆ ಸಮಾವೇಶದ ಜವಾಬ್ದಾರಿ ವಹಿಸಲಾಗಿದೆ.75 ದಿನ ನಡೆಯಲಿರುವ ರಥಯಾತ್ರೆ ವೇದಿಕೆ ಮೇಲೆ 90 ನಾಯಕರಿಗೆ ಅವಕಾಶ ಕಲ್ಪಿಸಲಾಗಿದ್ದು, ಮೊದಲ ಸಾಲಿನಲ್ಲಿ ಪ್ರಮುಖ