ಬಿಜೆಪಿಯವರ ಪರಿವರ್ತನಾ ರ್ಯಾಲಿಗೆ ಯಾರು ಮರಳಾಗುವುದಿಲ್ಲ. ಬಿಜೆಪಿಯವರಿಗೆ ಕೋಮುವಾದದಲ್ಲಿ ಮಾತ್ರ ನಂಬಿಕೆಯಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಪರಿವರ್ತನೆ ಎಂದರೆ ಸಮಾಜ ಪರಿವರ್ತನೆಯಲ್ಲ. ಸಮಾಜ ಒಡೆಯುವುದೇ ಅವರ ಪರಿವರ್ತನೆ ಎಂದು ಕಿಡಿಕಾರಿದ್ದಾರೆ. ಬಿಜೆಪಿಯವರು ಯಾವತ್ತಾದರೂ ರೈತರ, ಮಹಿಳೆಯರ ಪರ ಮಾತನಾಡಿದ್ದಾರಾ? ಕೇವಲ ಒಂದು ಸಮುದಾಯವನ್ನು ಎತ್ತಿಕಟ್ಟಿ ಮತ್ತೊಂದು ಸಮುದಾಯವನ್ನು ತುಳಿಯುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡಿತನದ ಸಂಗತಿ ಎಂದು ಗುಡುಗಿದರು.