ಸರಕಾರ ನಿಷೇಧ ಹೇರಿರುವ ಮಧ್ಯೆಯೂ ಬಿಜೆಪಿ ಬೈಕ್ ರ್ಯಾಲಿ ಆಯೋಜಿಸಲು ಮುಂದಾಗಿರುವುದು ಪೊಲೀಸರಿಗೆ ತಲೆ ನೋವು ತಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನಗರದ ಜ್ಯೋತಿ ಸರ್ಕಲ್ ಬಳಿ ಜಮಾವಣೆಗೊಂಡ ನೂರಾರು ಬಿಜೆಪಿ ಕಾರ್ಯಕರ್ತರು, ನ್ಯಾಯ ಬೇಕು, ಕಾಂಗ್ರೆಸ್ ತೊಲಗಲಿ ಎನ್ನುವ ಘೋಷಣೆಗಳನ್ನು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಯುವ ಮೊರ್ಚಾದಿಂದ ಮಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ