ಬೆಂಗಳೂರು : ಇಂದು ಸಂಜೆ 5 ಗಂಟೆಗೆ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಲಿದ್ದು, ಬಿಜೆಪಿ ನಾಯಕರ ಈ ಮೀಟಿಂಗ್ ಬಾರೀ ಮಹತ್ವ ಪಡೆದಿದೆ ಎನ್ನಲಾಗಿದೆ. ಬಿ.ಎಲ್.ಸಂತೋಷ್, ಕಟೀಲ್ ಸಮ್ಮುಖದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಬಿಜೆಪಿಯ ಎಲ್ಲಾ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ. ನಿನ್ನೆ, ಮೊನ್ನೆ ಕೆಲ ಸಚಿವರ ಜತೆ ಸಂತೋಷ್ ಚರ್ಚೆ ನಡೆಸಿದ್ದು, ಸಚಿವರ ಮೌಲ್ಯಮಾಪನ ಗುಸುಗುಸು ಬೆನ್ನಲೇ ಸಭೆ ನಡೆಸಲಾಗಿದೆ.ಸಂಪುಟ ವಿಸ್ತರಣೆ ಚರ್ಚೆ ಬೆನ್ನಲೇ ಈ ಮೀಟಿಂಗ್ ನಡೆಯುತ್ತಿರುವುದು ಮಹತ್ವ ಪಡೆದಿದೆ.