ಚುನಾವಣಾ ದಿನ ಹತ್ತಿರವಾಗ್ತಿದೆ. ಇತ್ತ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಲು ಜನ ಮನ ತಲುಪಲು ಪ್ರತಯ್ನ ಮಾಡ್ತಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ಅವರು ಇಂದು ಕ್ಷೇತ್ರದಲ್ಲಿ ಅಬ್ಬದರ ಪ್ರಚಾರ ಮಾಡಿದರು. ಕ್ರಮ ಸಂಖ್ಯೆ 5 ಗೆದ್ದ ನಂತರ ಅಭಿವೃದ್ಧಿ ಆಡಳಿತ ಕೂಡ ಐದು ವರ್ಷ ಅಂತ ಜನರಲ್ಲಿ ಭರವಸೆ ನೀಡಿದರು. ಪ್ರಚಾರಕ್ಕೂ ಮೊದಲು ನಗರದ ಮಂಗನಹಳ್ಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.