ಪಶ್ಚಿಮ ಭಾರತದಲ್ಲಿರುವ ದಿಯು ಮತ್ತು ದಮನ್ಗಳ ಪೈಕಿ ದಿಯು ಮುನ್ಸಿಪಲ್ ಕೌನ್ಸಿಲ್ಗೆ ಇದೇ 7ರಂದು ಚುನಾವಣೆ ನಡೆದಿತ್ತು. ಅಚ್ಚರಿಯ ರೀತಿಯಲ್ಲಿ ಚುನಾವಣೆ ನಡೆದ ಒಟ್ಟೂ 13 ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕಗೆ ಹಾಕಿಕೊಂಡಿದೆ. ಒಂದೇ ಒಂದು ಕ್ಷೇತ್ರವನ್ನೂ ಗೆಲ್ಲಲು ಕಾಂಗ್ರೆಸ್ಗೆ ಸಾಧ್ಯವಾಗದೇ ಭಾರಿ ಮುಖಭಂಗ ಅನುಭವಿಸಿದೆ. ಬಿಜೆಪಿ 6 ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿತ್ತು. ಆದರೆ, ಉಳಿದ ಏಳು ಸ್ಥಾನಕ್ಕೆ ಜುಲೈ 7 ರಂದು ಚುನಾವಣೆ ನಡೆದು, ಈಗ ಫಲಿತಾಂಶ ಹೊರಬಿದ್ದಿದೆ.