ವಿಪಕ್ಷ ನಾಯಕ ನೇಮಕ ವಿಳಂಭ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಪ್ರತಿಕ್ರಿಯಿಸಿದ್ದು, ನಮ್ಮ 66 ಶಾಸಕರು ವಿಧಾನಸಭೆಯಲ್ಲಿ, 34 ಶಾಸಕರು ಮೇಲ್ಮನೆಯಲ್ಲಿದ್ದಾರೆ.ಎಲ್ಲರೂ ಚರ್ಚೆಯನ್ನ ತೆಗೆದುಕೊಳ್ಳಲಿದಾರೆ.ಬಿಜೆಪಿ ಯಾವುದೇ ವಿಚಾರ ಚರ್ಚೆ ಮಾಡಲು ಹಿಂದೇಟು ಹಾಕಲ್ಲ.ವಿಪಕ್ಷ ನಾಯಕ ನೇಮಕ ಸ್ವಲ್ಪ ತಡ ಆಗಿದೆ.ಪ್ರತಿಯೊಬ್ಬ ಶಾಸಕರೂ ಕೂಡ ವಿಪಕ್ಷ ನಾಯಕನ ರೀತಿಯಲ್ಲೇ ಸದನದಲ್ಲಿ ಚರ್ಚಿಸಲಿದ್ದಾರೆ.ಇವರು ಮಾಡಿರೋದು ಹಿಂದೂ ವಿರೋಧಿ ಬಜೆಟ್.ಮಠ, ಮಾನ್ಯಗಳಿಗೆ ಅನುದಾನ ನೀಡದೆ ಅಲ್ಪಸಂಖ್ಯಾತರಿಗೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿದ್ದಾರೆ.