ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ತೊರೆಯುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ಕೇವಲ ವದಂತಿ ಎಂದು ಮಾಜಿ ಸಚಿವ ಉಮೇಶ ಕತ್ತಿ ಸ್ಪಷ್ಟಪಡಿಸಿದ್ದಾರೆ.ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹುಕ್ಕೇರಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಾಗುವುದು. ತಪ್ಪು ಸಂದೇಶ ಬಿತ್ತರಿಸುವುದು ಕೆಲ ಮಾಧ್ಯಮಗಳು ನಿಲ್ಲಿಸಬೇಕು ಎಂದಿದ್ದಾರೆ.ಕಳೆದ ಒಂದು ವಾರದಿಂದ ನನ್ನ ಸ್ವಗ್ರಾಮ ಬೆಲ್ಲದ ಬಾಗೇವಾಡಿ ಬಿಟ್ಟು ನಾನು ಎಲ್ಲೂ ಹೋಗಿಲ್ಲ, ಹೀಗಿರುವಾಗ ಸಿಎಂ ಭೇಟಿ ಮಾಡಲು ಹೇಗೆ ಸಾಧ್ಯವೆಂದಿದ್ದಾರೆ.ಕಳೆದ ಹತ್ತು ವರ್ಷಗಳಿಂದ ಬಿಜೆಪಿ