ಬಿಜೆಪಿಯವರಿಗೆ ಕರಾವಳಿಯಲ್ಲಿ ಶಾಂತಿ ನೆಲೆಸುವುದು ಬೇಡವಾಗಿದೆ ಎಂದು ಕಾನೂನು ಖಾತೆ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ. ಮಂಗಳೂರಿನಲ್ಲಿ ನಡೆದ ಶಾಂತಿ ಸಭೆಗೆ ಬಿಜೆಪಿ ಬಹಿಷ್ಕಾರ ಹಾಕಿರುವುದು ನೋಡಿದಲ್ಲಿ, ಅದಕ್ಕೆ ಶಾಂತಿ ಸ್ಥಾಪನೆಯಾಗುವುದು ಬೇಡವಾಗಿದೆ. ಆದ್ದರಿಂದಲೇ ಶಾಂತಿಯನ್ನು ಸಭೆಯಿಂದ ದೂರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ಬಂದಾಗ ಧರ್ಮ, ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಜನತೆಯ ಭಾವನೆಗಳೊಂದಿಗೆ ಚೆಲ್ಲಾಟವಾಡುವುದು ಬಿಜೆಪಿಯ ಹುನ್ನಾರವಾಗಿದೆ. ಆದ್ದರಿಂದ ಯಾವುದೋ ವಿಷಯವನ್ನು ಮುಂದಿಟ್ಟುಕೊಂಡು ಹಿಂಸಾಚಾರಕ್ಕೆ ಕುಮ್ಮಕ್ಕು