ಎಫ್ಐಆರ್ ದಾಖಲಾಗಿರುವವರ ಪರ ಬಿಜೆಪಿ ಹೋರಾಟ ಮಾಡುತ್ತಿದೆ. ಇದು ಎಂತಹ ಹೋರಾಟವೆಂದು ಹೇಳಲಿ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಸರಕಾರದ ವಿರುದ್ಧ ಬಿಜೆಪಿಯವರು ಮಾಡುತ್ತಿರುವ ಹೋರಾಟ ಎಂತಹದು ಎಂದು ಹೇಳಲಿ. ಆರೋಪಿಗಳ ಪರ ಬಿಜೆಪಿ ಹೋರಾಟ ಮಾಡುತ್ತಾ, ಬಿಜೆಪಿ ತನ್ನ ಮುಖವಾಡವನ್ನು ಬಯಲುಗೊಳಿಸಿದೆ ಎಂದು ವ್ಯಂಗ್ಯವಾಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ವಿರುದ್ಧ ಎಸಿಬಿಯಲ್ಲಿ ದೂರು ಬಂದಿದ್ದರಿಂದ ಎಫ್ಐಆರ್ ಆಗಿದೆ ಅಷ್ಟೆ. ಇದರಲ್ಲಿ ಸರಕಾರದ ಯಾವುದೇ