ಬೆಂಗಳೂರು : ಮೈತ್ರಿ ಸರ್ಕಾರದಿಂದ ಅನರ್ಹಗೊಂಡ ಅತೃಪ್ತ ಶಾಸಕರಿಗೆ ಬಿಜೆಪಿ ಕಡೆಯಿಂದ ಬಂಪರ್ ಆಫರ್ ಸಿಗಲಿದೆ ಎನ್ನಲಾಗಿದೆ. ಹೌದು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾಗಿದ್ದ ಅತೃಪ್ತ ಶಾಸಕರನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಅನರ್ಹಗೊಳಿಸಲಾಗಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಇನ್ನು ವಿಚಾರಣೆ ಬಾಕಿ ಇದೆ. ಈ ನಡುವೆ ಇದೀಗ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಂದಾದ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಿದ