ರಾಜ್ಯದ ವಿಧಾನಸಭಾ ತಯಾರಿ ದೃಷ್ಟಿಯಿಂದ BJP ಹಿಂದುಳಿದ ವರ್ಗದ ಸಮಾವೇಶ ನಡೆಸಿದೆವು. ಕಲ್ಬುರ್ಗಿ ಸಮಾವೇಶ ಬಹಳ ಶಿಸ್ತಿನಿಂದ ಯಶಸ್ವಿಯಾಯ್ತು. ಕಾಂಗ್ರೆಸ್, JDS ಏನೇ ಸರ್ಕಸ್ ಮಾಡಿದ್ರೂ ಹಿಂದುಳಿದ ಸಮಾಜಕ್ಕೆ ಅತಿ ಹೆಚ್ವು ಅನುಕೂಲ ಆಗಿದ್ದು BJPಯಿಂದ ಎಂದು ಮಾಜಿ ಸಚಿವ K.S ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಆ ಕಾರ್ಯಕ್ರಮ ನೋಡಿ ಕಾಂಗ್ರೆಸ್ JDSನವರಿಗೆ ಆಶ್ಚರ್ಯ ಆಗಿದೆ. ಹಿಂದುಳಿದ ಸಮಾಜಕ್ಕೆ ಈ ಹಿಂದಿನ ಸರ್ಕಾರಗಳು ಯಾವುದೇ ಅನುದಾನ ಕೊಡಲಿಲ್ಲ.