ವಿಪಕ್ಷ ನಾಯಕನ ಆಯ್ಕೆ ಇಂದು ಆಗುತ್ತೆ, ರಾತ್ರಿ ಆಗುತ್ತೆ, ಆಗೇ ಬಿಡ್ತು ಎಂಬ ರೆಡಿಮೇಡ್ ಡೈಲಾಗ್ ಗಳನ್ನ ಕೇಳಿ-ಕೇಳಿ ಸಾಕಾಗೋಗಿದೆ. ಅವರು ಕೊಡ್ತಿಲ್ಲ, ಇವರು ಬಿಡ್ತಿಲ್ಲ ಎಂಬಂತಾಗೋಗಿದೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ. ಕಳೆದ 10 ದಿನಗಳಿಂದ ವಿಪಕ್ಷ ನಾಯಕನ ಆಯ್ಕೆ ಸರ್ಕಸ್ ಬಿಜೆಪಿ ನಡೆಯುತ್ತಲೇ ಇದ್ದು 3 ಬಣಗಳ ನಡುವೆ ಇನ್ನು ಒಮ್ಮತ ಮೂಡದ ಕಾರಣ ಆಯ್ಕೆ ಇನ್ನು ಕಗ್ಗಂಟಾಗೆ ಉಳಿದಿದೆ. ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದು ಆಯ್ತು, ನಾಳೆ ಇಂದ ಬಜೆಟ್ ಮೇಲಿನ ಚರ್ಚೆ ಆರಂಭವಾಗ್ತಿದ್ದು , ಸದನದಲ್ಲಿ ಆಡಳಿತ ಪಕ್ಷದ ಮೇಲೆ ಮುಗಿಬೀಳ್ಬೇಕಾದ ವಿಪಕ್ಷದ ಸಾರಥಿಯೇ ಇಲ್ಲದೆ ಬಜೆಟ್ ಮೇಲಿನ ಚರ್ಚೆ ಆರಂಭವಾಗ್ತಿರೋದೇ ದುರಂತ