ನಾವು ಆಪರೇಷನ್ ಕಮಲ ಮಾಡಲ್ಲ. ಆ ರೀತಿಯ ತೀರ್ಮಾನ ಆಗಿದೆ. ಶಿವಮೊಗ್ಗ, ಬಳ್ಳಾರಿ, ಜಮಖಂಡಿಯಲ್ಲಿ ನೂರಕ್ಕೆ ನೂರು ಗೆಲ್ತೀವಿ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.ಗದಗ ಸಿದ್ಧಲಿಂಗ ಸ್ವಾಮಿಜಿ ಲಿಂಗೈಕ್ಯರಾದ ಹಿನ್ನೆಲೆ ಮಠಕ್ಕೆ ಭೇಟಿ ಕೊಟ್ಟು ಮಾಧ್ಯಮರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ 105 ಎಂಎಲ್ಎಗಳಾದ ಮೇಲೆ ರಾಜ್ಯದ ರಾಜಕೀಯ ಚಿತ್ರಣ ಬದಲಾಗುತ್ತೆ. ಕಾಂಗ್ರೆಸ್ನ ಒಳಜಗಳದಿಂದ ಕಾಂಗ್ರೆಸ್ ಶಾಸಕರೇ ದಿನಕ್ಕೊಬ್ಬರು ಬಂಡಾಯ ಏಳ್ತಿದ್ದಾರೆ. ಸರ್ಕಾರದಲ್ಲಿ ಏನೂ ಸರಿಯಿಲ್ಲ. ಕುಮಾರಸ್ವಾಮಿ ಹಾಗೂ