ಬಿಜೆಪಿಯವರು ಏನ್ ಕಡಿದು ಕಟ್ಟಿ ಹಾಕಿದ್ದಾರೆ? ಹೀಗಂತ ಗೃಹ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರು 150 ಸೀಟ್ ಗೆಲ್ಲುವುದಕ್ಕೆ ಏನು ಸಾಧನೆ ಮಾಡಿದ್ದಾರೆ? ಅವರ ಆಡಳಿತ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳಾಗಿದ್ದರು. ಸಚಿವರು, ಶಾಸಕರು ಜೈಲಿಗೆ ಹೋಗಿ ಬಂದಿದ್ದೇ ಬಿಜೆಪಿ ಸಾಧನೆ ಎಂದು ಲೇವಡಿ ಮಾಡಿದ್ದಾರೆ. ಆಪರೇಷನ್ ಕಮಲ, ರೆಸಾರ್ಟ ರಾಜಕಾರಣ, ಗಣಿ ಧೂಳಿಗೆ ಬಿಜೆಪಿ ಖ್ಯಾತಿ ಪಡೆದಿದೆ. ಮಾಡಬಾರದ್ದನ್ನೆಲ್ಲಾ ಮಾಡಿ ಬಿಜೆಪಿಯವರು ಮನೆಗೆ ಹೋದರು ಎಂದಿದ್ದಾರೆ.