ಬೆಂಗಳೂರು : ಶಿವಮೊಗ್ಗದಲ್ಲಿ ನಡೆದ ಎಲ್ಲಾ ದಂಗೆ, ಕೊಲೆಗಳಿಗೆ ಬಿಜೆಪಿಯೇ ನೇರ ಹೊಣೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ತಡರಾತ್ರಿ ಹಿಂಸಾಚಾರ ವಿಚಾರ ಕುರಿತು ಹೀಗೆ ಪ್ರತಿಕ್ರಿಯಿಸಿದ್ದಾರೆ. ಶಿವಮೊಗದಲ್ಲಿ ಜಿಲ್ಲೆಯವರೇ ಗೃಹಸಚಿವರಾಗಿದ್ದರು. ಆದರೂ ಯಾಕೆ ಇದೆಲ್ಲಾ ಕಂಟ್ರೋಲ್ ಮಾಡಲಿಲ್ಲ? ಎಲ್ಲಾ ದಂಗೆ, ಕೊಲೆಗಳಿಗೆ ಬಿಜೆಪಿಯೇ ನೇರ ಹೊಣೆ. ಕಾಂಗ್ರೆಸ್ ಬಂದ ಮೇಲೆ ಇದು ಇನ್ನಷ್ಟು ಹೆಚ್ಚಾಗುತ್ತೆ