Widgets Magazine

ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ-ಸಿದ್ದರಾಮಯ್ಯ

ಬೆಂಗಳೂರು| pavithra| Last Modified ಬುಧವಾರ, 4 ಸೆಪ್ಟಂಬರ್ 2019 (10:16 IST)
ಬೆಂಗಳೂರು : ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಅರೆಸ್ಟ್ ಮಾಡಿದ ಹಿನ್ನಲೆಯಲ್ಲಿ ಮಾಜಿ ಸಿಎಂ , ಬಿಜೆಪಿ ದ್ವೇಷದ,  ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ. ಚಿದಂಬರಂ ವಿರುದ್ಧ ಸೇಡಿನ ರಾಜಕರಣ ಮಾಡಿದ್ದರು. ಈಗ ಡಿಕೆ ಶಿವಕುಮಾರ್ ವಿರುದ್ಧ ಮಾಡುತ್ತಿದ್ದಾರೆ. ಇಡಿ ಸಮನ್ಸ್ ಕೊಟ್ಟಿದ್ದಕ್ಕೆ ಡಿಕೆಶಿ ವಿಚಾರಣೆಗೆ ಹಾಜರಾಗಿದ್ರು. ಹಬ್ಬದ ದಿನ ತಂದೆಗೆ ಎಡೆ ಹಾಕಲು ಅವಕಾಶ ನೀಡಿಲ್ಲ. ಮನುಷ್ಯತ್ವ ಇರುವವರು ಇಂತಹ ಕೆಲಸ ಮಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ.


ಇದು ರಾಜಕೀಯ ಸೇಡಿನ ಕ್ರಮವಾಗಿದೆ. ಇಂತಹ ನಡೆಯನ್ನು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ. ಡಿಕೆಶಿ ಗೆ ಕೋರ್ಟ್ ನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ. ಗುಜರಾತ್ ಶಾಸಕರಿಗೆ ರಕ್ಷಣೆ ನೀಡಿದ್ದಕ್ಕೆ ಇಂತಹ ಕ್ರಮ. ಈ ಕಾರಣಕ್ಕಾಗಿ ಬಿಜೆಪಿ ಸೇಡಿನ ರಾಜಕರಣ ಮಾಡ್ತಿದೆ ಎಂದು ಅವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :