ಕಾಂಗ್ರೆಸ್ ನ ಕೆಲ ಚೇಲಾಗಳು, ರವೀಂದ್ರನಾಥ್ ಹಾಗೂ ಶಿಸ್ತಿನ ಬಿಜೆಪಿ ಪಕ್ಷದ ಬಗ್ಗೆ ಕಳ್ಳರು, ಕದೀಮರು, ಸುಳ್ಳರು ಎಂದು ಹೇಳಿಕೆ ಕೊಡುತ್ತಿದ್ದಾರೆ. ಇದೇ ರೀತಿ ಮುಂದುವರೆಸಿದರೆ, ಮುಂದಿನ ದಿನಗಳಲ್ಲಿ ಕಲ್ಲು, ಕಣಿಗೆ ಬಾರುಕೋಲು ತಗೆದುಕೊಂಡು ಬುದ್ದಿ ಕಲಿಸಬೇಕಾಗುತ್ತದೆ ಎಂದು ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಮುಖಂಡ ಧನಂಜಯ ಕಡ್ಲೇಬಾಳು ಆಕ್ರೋಶ ವ್ಯಕ್ತಪಡಿಸಿದರು. ನಗರದ ವರದಿಗಾರರ ಕೂಟದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದವರ ಮೇಲೆ ಕಾಂಗ್ರೆಸ್ ನವರು ಇಲ್ಲ ಸಲ್ಲದ