ಟಿಪ್ಪು ಜಯಂತಿ ಬೇಕಿದ್ದಿದ್ದು ನಿಮಗೇ: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ

ಬೆಂಗಳೂರು, ಭಾನುವಾರ, 11 ನವೆಂಬರ್ 2018 (09:26 IST)

ಬೆಂಗಳೂರು: ವಿವಾದಿತ ಟಿಪ್ಪು ಜಯಂತಿ ವ್ಯಾಪಕ ವಿರೋಧದ ನಡುವೆಯೂ ನಿನ್ನೆ ನೆರವೇರಿದೆ. ಅದರ ಜತೆಗೆ ಆಡಳಿತರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ  ವಾಕ್ಸಮರವೂ ಜೋರಾಗಿ ನಡೆದಿದೆ.
 
ಈ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿ ನಾಯಕ ಸುರೇಶ್ ಕುಮಾರ್ ‘ಸಿದ್ದರಾಮಯ್ಯನವರೇ, ಅಂದ ಹಾಗೆ ಟಿಪ್ಪು ಜಯಂತಿ ಮಾಡಬೇಕೆಂದು ಯಾರು ಮನವಿ ಮಾಡಿದ್ದರು? ನಿಮ್ಮನ್ನು ಬಿಟ್ಟರೆ ಇದು ಯಾರಿಗೂ ಬೇಕಿರಲಿಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಇನ್ನೊಂದೆಡೆ ಅರವಿಂದ ಲಿಂಬಾವಳಿ ಕೂಡಾ ಟ್ವೀಟ್ ಮಾಡಿ ‘ಸೆಕ್ಷನ್ 144 ಹೇರಿ, ಸಮಾಜದಲ್ಲಿ ಋಣಾತ್ಮಕ ಚಿಂತನೆ ಹರಡಿದ ನಾಯಕನ ಜಯಂತಿ ಆಚರಿಸಬೇಕಾದ ಅಗತ್ಯವೇನಿತ್ತು? ಇಷ್ಟೊಂದು ವಿರೋಧದ ನಡುವೆಯೂ ಸರ್ಕಾರ ಕನ್ನಡ ವಿರೋಧಿ ನಾಯಕನೊಬ್ಬನ ಜಯಂತಿ ಆಚರಿಸಿರುವುದು ನಿಜಕ್ಕೂ ನಾಚಿಕೆಗೇಡು’ ಎಂದು ಟೀಕಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಟಿಪ್ಪು ಜಯಂತಿ ಬೇಕಿದ್ದಿದ್ದು ನಿಮಗೇ: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ

ಬೆಂಗಳೂರು: ವಿವಾದಿತ ಟಿಪ್ಪು ಜಯಂತಿ ವ್ಯಾಪಕ ವಿರೋಧದ ನಡುವೆಯೂ ನಿನ್ನೆ ನೆರವೇರಿದೆ. ಅದರ ಜತೆಗೆ ಆಡಳಿತರೂಢ ...

news

ಮಹಿಳಾ ಟೆಕ್ಕಿಯ ಬಟ್ಟೆ ಹರಿದ ಆರೋಪಿಗಳು ಅಂದರ್

ಕ್ಷುಲ್ಲಕ ಕಾರಣಕ್ಕೆ ಮಹಿಳಾ ಟೆಕ್ಕಿಯ ಕೆನ್ನೆಗೆ ಹೊಡೆದು ಆಕೆಯ ಬಟ್ಟೆಯನ್ನು ಹರಿದ ಇಬ್ಬರು ಆರೋಪಿಗಳನ್ನು ...

news

ಟಿಪ್ಪು ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳದ ಸಿಎಂ ಹೇಳಿದ್ದೇನು ಗೊತ್ತಾ?

ರಾಜ್ಯಾದ್ಯಂತ ಆಚರಣೆ ಮಾಡಲಾಗುತ್ತಿರುವ ಟಿಪ್ಪು ಸುಲ್ತಾನ್ ಜಯಂತ್ಯುತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳದ ...

news

ಟಿಪ್ಪು ಜಯಂತ್ಯುತ್ಸವ: ಸಚಿವ ಡಿಕೆಶಿ ಹೇಳಿದ್ದೇನು ಗೊತ್ತಾ?

ನಾಡಿಗೆ ಉತ್ತಮವಾದ ಕೆಲಸ ಮಾಡಿದವರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ. ಈ ಕಾರಣಕ್ಕಾಗಿ ಟಿಪ್ಪು ...