ಬೆಂಗಳೂರು: ಕೇರಳ ಸಿಎಂ ಪಿಣರಾಯಿ ವಿಜಯನ್ ಭೇಟಿ ವಿರೋಧಿಸುವವರು ಚಪ್ಪಲಿಗೆ ಸಮ ಎಂದು ಆಹಾರ ಖಾತೆ ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿರುವುದಕ್ಕೆ ವ್ಯಂಗ್ಯವಾಡಿದ ಬಿಜೆಪಿ ವಕ್ತಾರ ಸುರೇಶ್ ಕುಮಾರ್, ಆಹಾರ ಖಾತೆ ಸಚಿವರ ಬಾಯಿಯಲ್ಲಿಯೇ ಇಂತಹ ಮಾತುಗಳು ಬರುತ್ತವೆ ಎಂದಾದರೆ ಆಹಾರ ತಿನ್ನುವವರ ಬಾಯಿಯಲ್ಲಿ ಯಾವ ರೀತಿಯ ಮಾತುಗಳು ಬರಬಹುದು ಎಂದು ತಿರುಗೇಟು ನೀಡಿದ್ದಾರೆ.