ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ವರುಣಾ ಟಿಕೆಟ್ ನೀಡುವ ಬಗ್ಗೆ ಉಂಟಾಗಿರುವ ಗೊಂದಲ ಪರಿಹಾರಕ್ಕೆ ಕೇಂದ್ರ ನಾಯಕರು ಇಂದು ಸಭೆ ಸೇರಲಿದ್ದಾರೆ.ಮೈಸೂರಿನಲ್ಲಿರುವ ಬಿಎಸ್ ವೈ ಭೇಟಿಯಾಗಿರುವ ರಾಜ್ಯ ಉಸ್ತುವಾರಿಗಳಾದ ಮುರಳೀಧರ್ ರಾವ್, ಪ್ರಕಾಶ್ ಜಾವೇಡ್ಕರ್ ಸೇರಿದಂತೆ ಮೈಸೂರು-ಚಾಮರಾಜನಗರ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ನಿಯೋಗ ಇಂದು ಸಭೆ ನಡೆಸಲಿದೆ.ಬಿವೈ ವಿಜಯೇಂದ್ರಗೆ ಟಿಕೆಟ್ ನೀಡುವ ಬಗ್ಗೆ ಇಂದು ಅಂತಿಮ ನಿರ್ಧಾರವಾಗಲಿದೆ. ಅತ್ತ ಬಿಎಸ್ ವೈ ಕುಟುಂಬ ದೇವರ ಮೊರೆ