ಬಿಜೆಪಿ ಮುಖಂಡನೊಬ್ಬ ಗುಂಡಾಗಿರಿ ನಡೆಸಿ ಖಾಸಗಿ ಚಾನೆಲ್ ವರದಿಗಾರನ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹೆಬ್ಬಾಕ್ ರವಿ, ಬಾವಿಕಟ್ಟೆ ನಾಗಣ್ಣ ಎನ್ನುವವರಿಂದ ಖಾಸಗಿ ಚಾನೆಲ್ ವರದಿಗಾರ ವಾಗೀಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಖಾಸಗಿ ಚಾನೆಲ್ ವರದಿಗಾರ ವಾಗೀಶ್ ಅಕ್ರಮ ಗಣಿಗಾರಿಕೆಯ ಬಗ್ಗೆ ವರದಿ ಮಾಡಿರುವುದರಿಂದ ಆಕ್ರೋಶಗೊಂಡ ಹೆಬ್ಬಾಕ್ ರವಿ, ಪ್ರೆಸ್ಮೀಟ್ ನೆಪದಲ್ಲಿ ಕರೆಸಿಕೊಂಡು ಏಕಾಏಕೀ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.