ನಾವು ವಿಪಕ್ಷದಲ್ಲಿದ್ದಾಗ ಬಳ್ಳಾರಿಗೆ ನಡೆದುಕೊಂಡು ಹೋಗಿದ್ದೇವೆ. ಅದರಂತೆ, ಬಿಜೆಪಿಯವರು ಕೂಡಾ ಮಂಗಳೂರಿಗೆ ನಡೆದುಕೊಂಡು ಹೋಗಲಿ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಸಲಹೆ ನೀಡಿದ್ದಾರೆ. ವಿಧಾನಸೌಧದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಮಂಗಳೂರಿಗೆ ನಡೆದುಕೊಂಡು ಹೋದಲ್ಲಿ ಸಂಚಾರಿ ನಿಯಮಾವಳಿಗಳು ಅನ್ವಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. ಬಿಜೆಪಿ ಯುವಮೋರ್ಚಾದವರು ಬೈಕ್ ರ್ಯಾಲಿಯ ಬಗ್ಗೆ ಅನುಮತಿ ಕೇಳಿದ್ದಾರೆ. ಆಯಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಅನುಮತಿ ನೀಡುವ ಬಗ್ಗೆ ನಿರ್ಧರಿಸುತ್ತಾರೆ. ಎಷ್ಟು ಜನ