ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಮುಳುಗಿಸಲು ಬಿಜೆಪಿ ಪಕ್ಷದ ನಾಯಕರೇ ಸಾಕು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ ಖಾದರ್ ವ್ಯಂಗವಾಡಿದ್ದಾರೆ. ವಿಕಾಸಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಅನಂತ್ ಕುಮಾರ್ ಹೆಗ್ಡೆ, ಸಂಸದರಾ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು, ಪ್ರತಾಪ್ ಸಿಂಹ ಮತ್ತು ಮುಖಂಡ ಗೋ.ಮಧುಸೂದನ್ ಅವರೇ ಬಿಜೆಪಿ ಪಕ್ಷವನ್ನು ಮುಳುಗಿಸುತ್ತಾರೆ ಎಂದಿದ್ದಾರೆ. ಒಬ್ಬರು ಸಂವಿಧಾನ ಬದಲಾಯಿಸಬೇಕು ಎಂದರೆ, ಇನ್ನೊಬ್ಬರು ಬೆಂಕಿ ಹಚ್ಚಬೇಕು