ಬಿಜೆಪಿ ಸಂಸದರೊಬ್ಬರಿಗೆ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರೇ ಘೇರಾವ್ ಹಾಕಿರೋ ಘಟನೆ ನಡೆದಿದೆ. ಪ್ರವಾಹ ಪರಿಹಾರ ನೀಡದ ಕೇಂದ್ರ ಸರಕಾರದ ವಿರುದ್ಧ ಮಾತನಾಡದೇ, ಇಲ್ಲಿಗೆ ಬಂದು ಪಾದಯಾತ್ರೆ ಮಾಡುತ್ತಿದ್ದೀರಾ? ಮೊದಲು ಗಟ್ಟಿ ಧ್ವನಿ ಮಾಡಿ ಪರಿಹಾರ ತನ್ನಿ. ಆ ಮೇಲೆ ಪಾದಯಾತ್ರೆ ಮಾಡಿ. ಹೀಗಂತ ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆಗೆ ಬಿಜೆಪಿ ಕಾರ್ಯಕರ್ತರು ಘೇರಾವ್ ಹಾಕಿದ್ದಾರೆ.ಹುದಲಿ ಗ್ರಾಮದಲ್ಲಿ ಮಹಾತ್ಮಾ ಗಾಂಧೀಜಿಯರ ಜನ್ಮ ದಿನಾಚರಣೆ ಅಂಗವಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ