ಬಿಜೆಪಿ ನಾಯಕರು ವಿಕೃತ ಮನೋಭಾವ ಬಿಡಬೇಕು ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಸಲಹೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಕ್ತ ಆಧಾರಗಳಿಲ್ಲದೇ ಯಾವುದೇ ಸಂಘಟನೆಯನ್ನು ನಿಷೇಧ ಮಾಡುವುದಕ್ಕಾಗುವುದಿಲ್ಲ. ವರದಿ ತರಿಸಿಕೊಂಡ ನಂತರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ದೀಪಕ್ ರಾವ್ ಹತ್ಯೆಯಾಗಲಿ, ಬಶೀರ್ ಹತ್ಯೆಯಾಗಲಿ ತುಂಬಾ ನೋವು ತಂದಿದೆ. ಇಂತಹ ಹತ್ಯೆಗಳಿಗೆ ಕಡಿವಾಣ ಹಾಕಬೇಕಾಗಿದೆ. ಒಂದು ವೇಳೆ ಘಟನೆಯಲ್ಲಿ ಯಾವುದೇ ಸಂಘಟನೆ ಭಾಗಿಯಾಗಿರುವುದು