ಮೈಸೂರು : ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅಳಿಯ ಬಿಜೆಪಿ ಶಾಸಕ ಹರ್ಷವರ್ಧನ್ ಅವರು ಅಂಬೇಡ್ಕರ್ ಪುತ್ಥಳಿಗೆ ಬೇಕಾಬಿಟ್ಟಿ ಪುಷ್ಪಾರ್ಚನೆ ಮಾಡಿ ಅವಮಾನ ಮಾಡಿದ್ದಕ್ಕೆ ದಲಿತ ಸಂಘಟನೆಗಳು ಶಾಸಕರ ವಿರುದ್ಧ ಗರಂ ಆಗಿದ್ದಾರೆ. ಶನಿವಾರ ಮೊರಾರ್ಜಿ ದೇಸಾಯಿ ವಸತಿ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ ಹರ್ಷವರ್ಧನ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಆಗಮಿಸಿದ್ದರು. ಈ ವೇಳೆ ಪ್ರಿಯಾಂಕ್ ಖರ್ಗೆ ಜೊತೆ ಮಾತಿಗಿಳಿದಿದ್ದ ಹರ್ಷವರ್ಧನ್ ಅವರು, ಅಂಬೇಡ್ಕರ್ ಪುತ್ಥಳಿಯನ್ನೆ ನೋಡದೇ ಬೇಕಾಬಿಟ್ಟಿಯಾಗಿ ಪುಷ್ಪರ್ಚನೆ