ಬಿಜೆಪಿ ಲಾಬಿ, ಅಧಿಕಾರ ನನಗೆ ಬೇಕಿಲ್ಲ ಎಂದ ಕೈ ಶಾಸಕ

ದಾವಣಗೆರೆ, ಗುರುವಾರ, 11 ಜುಲೈ 2019 (18:05 IST)

ಮೈತ್ರಿ ಸರಕಾರದ ಶಾಸಕರನ್ನು ಬಿಜೆಪಿ ನಡೆಸುತ್ತಿದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ ಅಂತ ಕೈ ಪಡೆ ಹೇಳುತ್ತಿದೆ.

ನನ್ನನ್ನು ಬಿಜೆಪಿಯವರು ಸಂಪರ್ಕಿಸಿದ್ದರು. ಆದರೆ ನಾನು ಅವರ ಲಾಬಿಗೆ ಮಣಿದಿಲ್ಲ. ಹೀಗಂತ ಕಾಂಗ್ರೆಸ್ ಶಾಸಕರೊಬ್ಬರು ಹೇಳುವ ಮೂಲಕ ತೆರೆಮರೆಯಲ್ಲೇ ಬಿಜೆಪಿ ಆಪರೇಷನ್ ಕಮಲಕ್ಕೆ ಕೈಹಾಕಿದೆ ಎನ್ನೋದನ್ನ ಬಹಿರಂಗಪಡಿಸಿದ್ದಾರೆ.

ನಾನು ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ಕೊಡಲ್ಲ. ಹೀಗಂತ ದಾವಣಗೆರೆಯಲ್ಲಿ ಹರಿಹರ ಶಾಸಕ ಎಸ್. ರಾಮಪ್ಪ ಹೇಳಿಕೆ ನೀಡಿದ್ದಾರೆ.

ಹರಿಹರದ ರಾಮಪ್ಪ, ಯಾವುದೇ ಕಾರಣಕ್ಕೂ ಸರ್ಕಾರ ಬೀಳಲ್ಲ ಎಂದರು. ಆದ್ರೆ ಸಿಎಂ ಬದಲಾವಣೆಯಾಗತ್ತೆ ಎಂದು ಒತ್ತಿ ಹೇಳಿದ್ರು. ಇದೆಲ್ಲವನ್ನು ಬಿಜೆಪಿಯವರೆ ಮಾಡಿದ್ದಾರೆ. ಒಂದು ವರ್ಷದಿಂದ ಇದೇ ರೀತಿ ಮಾಡುತ್ತಿದ್ದಾರೆ.

ಇಂದು ನನಗೂ ಪೋನ್ ಮಾಡಿದ್ದರು. ನಾನು ಯಾವುದೇ ಹಣ, ಅಧಿಕಾರಕ್ಕೆ ಮನಸೋತಿಲ್ಲ ಎಂದ್ರು.ನನಗೆ ಕ್ಷೇತ್ರದ ಜನರು ಮುಖ್ಯ. ನಾನು ಅವರಿಗೆ ಗೌರವ ನೀಡುತ್ತೇನೆ ಅಂತ ದಾವಣಗೆರೆಯಲ್ಲಿ ಶಾಸಕ ರಾಮಪ್ಪ ಹೇಳಿದ್ರು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರೆಬಲ್ ಶಾಸಕರ ಹೈಡ್ರಾಮಾ ನಡುವೆ ಕಂಗಾಲಾದ ರೈತರು

ಮೈತ್ರಿ ಸರಕಾರದಲ್ಲಿ ಕೆಲವು ಶಾಸಕರು ರಾಜೀನಾಮೆ ನೀಡಿ ಹೈಡ್ರಾಮಾಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ...

news

ಹೆಣ್ಣು ಮಗುವಿನೊಂದಿಗೆ ನದಿ ದಾಟಿ ಕಾಡಿಗೆ ಹೋಗಿದ್ಯಾಕೆ?

ಮುಸುಕುಧಾರಿಯೊಬ್ಬ ಹೆಣ್ಣುಮಗುವನ್ನು ಹೊತ್ತುಕೊಂಡು ನದಿ ದಾಟಿ ಕಾಡಿಗೆ ಹೋಗಿರುವ ಘಟನೆ ನಡೆದಿದೆ.

news

ಅತೃಪ್ತ ಶಾಸಕರ ಶವಯಾತ್ರೆ ; ಭುಗಿಲೆದ್ದ ಆಕ್ರೋಶ

ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ರಾಜೀನಾಮೆ ನೀಡುತ್ತಿರೋದಕ್ಕೆ ಆಕ್ರೋಶ ಹೆಚ್ಚಾಗುತ್ತಿದ್ದು, ಮೈತ್ರಿ ...

news

ಸ್ಪೀಕರ್ ಮುಂದೆ ಅತೃಪ್ತರು: ಹೆಚ್ಚು ಮಾತನಾಡೋದಿಲ್ಲ ಅಂತ ಖರ್ಗೆ ಗುಡುಗು

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರೋರು ಸ್ಪೀಕರ್ ಅವರನ್ನು ಭೇಟಿ ಮಾಡುವಂತೆ ಸುಪ್ರೀಂಕೋರ್ಟ್ ಸೂಚನೆ