ಬೆಂಗಳೂರು : ಸಚಿವ ರಮೇಶ್ ಹೈಕಮಾಂಡ್ ನಂತೆ ವರ್ತಿಸುವುದು ಬೇಡ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಸಿಪಿ ಯೋಗೇಶ್ವರ್ ಪರ ಸಚಿವ ರಮೇಶ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ 9ಕೋಟಿ ಸಾಲ ಮಾಡಿದ್ದಾರೆ. ಮನೆ ಮಾರಿದ್ದಾರೆ ಎಂದಿದ್ದಾರೆ. ರಮೇಶ್ ಜಾರಕಿಹೊಳಿ ಬಿಜೆಪಿ ವಕ್ತಾರಾ, ಇಲ್ಲಾ ಸಿಎಂ? ಎಂದು ಕಿಡಿಕಾರಿದ್ದಾರೆ.ಯೋಗೇಶ್ವರ್ ಭ್ರಷ್ಟಾಚಾರ ಮಾಡಿ ಆಸ್ತಿ ಸಂಪಾದಿಸಿದ್ದಾರೆ. ಬಿಡದಿಯಲ್ಲಿ 50ಕೋಟಿ ರೂಪಾಯಿ ಆಸ್ತಿ ಸಂಪಾದಿಸಿದ್ದಾರೆ. ಯೋಗೇಶ್ವರ್ 4 ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ.