ಬೆಂಗಳೂರು: ಸ್ಪೀಕರ್ ಸ್ಥಾನಕ್ಕೆ ಬಿಜೆಪಿ ವತಿಯಿಂದ ನಾಮಪತ್ರ ಸಲ್ಲಿಸಿದ್ದ ಶಾಸಕ ಸುರೇಶ್ ಕುಮಾರ್ ಸದನ ಕಲಾಪಕ್ಕೆ ಕೆಲವೇ ಕ್ಷಣಗಳ ಮೊದಲು ನಾಮಪತ್ರ ಹಿಂಪಡೆದಿದ್ದಾರೆ.ಈ ಮೂಲಕ ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವಿರೋಧವಾಗಿ ಸ್ಪೀಕರ್ ಆಗಿ ಆಯ್ಕೆಯಾಗುವುದು ಖಚಿತವಾಗಿದೆ. ವಿಶ್ವಾಸ ಮತ ಪ್ರಕ್ರಿಯೆಗೆ ಮೊದಲು ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಬೇಕಿತ್ತು.ಆದರೆ ಇದೀಗ ಟ್ವಿಟರ್ ನಲ್ಲಿ ತಮ್ಮ ನಾಮಪತ್ರ ಹಿಂಪಡೆದ ಸುದ್ದಿ ಪ್ರಕಟಿಸಿದ ಸುರೇಶ್ ಕುಮಾರ್, ಈ ಮೂಲಕ ರಮೇಶ್ ಕುಮಾರ್ ಅವಿರೋಧವಾಗಿ