ದೋಸ್ತಿ ಸರಕಾರ ಪತನಗೊಂಡು ಬಿಜೆಪಿ ಸರಕಾರ ರಚನೆಯಾಗಿ ತಿಂಗಳೇ ಕಳೆಯುತ್ತಿರುವಾಗ ಬಿಜೆಪಿಗೆ ಆರಂಭದಿಂದಲೂ ಆಂತರಿಕವಾಗಿದ್ದ ಭಿನ್ನಮತ ಇದೀಗ ಬಹಿರಂಗಗೊಳ್ಳುತ್ತಿದೆ. ಮೈಸೂರು ದಸರಾದಲ್ಲಿ ಮೈಸೂರಿನವರೇ ಆಗಿರೋ ಶಾಸಕ ಹಾಗೂ ಮಾಜಿ ಸಚಿವ ಎ.ರಾಮದಾಸ್ ಎಲ್ಲ ಕಾರ್ಯಕ್ರಮಗಳಲ್ಲಿಯೂ ಪ್ರತಿ ಬಾರಿ ಮುಂದಾಗುತ್ತಿದ್ರು. ಆದರೆ ಈ ಸಲದ ದಸರಾದಲ್ಲಿ ಅವರು ಕಾಣಿಸಿಕೊಂಡಿಲ್ಲ. ದಸರಾ ಹಬ್ಬದಲ್ಲಿ ಭಾಗವಹಿಸದೇ ಇರೋ ಮೂಲಕ ಸಚಿವ ಸ್ಥಾನ ದೊರಕದ ಸಿಟ್ಟು, ಅಸಮಧಾನವನ್ನು ಎ.ರಾಮದಾಸ್ ಹೊರಹಾಕಿದ್ದಾರೆ ಎನ್ನುವ ಚರ್ಚೆ ನಡೆಯುತ್ತಿದೆ. ಮೈಸೂರು