Widgets Magazine

ಶಾಸಕರೆನ್ನುವುದನ್ನು ಮರೆತು ಕಾರ್ಮಿಕನಂತೆ ಕಲ್ಲು ಒಡೆದ ಬಿಜೆಪಿ ಶಾಸಕ

ಬೆಳಗಾವಿ| pavithra| Last Modified ಮಂಗಳವಾರ, 29 ಜನವರಿ 2019 (11:02 IST)
ಬೆಳಗಾವಿ : ಯಾವಾಗಲೂ ವಿವಾದದ ಮೂಲಕವೇ ಸುದ್ಧಿಯಾಗುತ್ತಿದ್ದ ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ. ರಾಜೀವ್ ಇದೀಗ ಶಾಸಕರೆನ್ನುವುದನ್ನು ಮರೆತು ಕಾರ್ಮಿಕನಂತೆ ಕೆಲಸ ಮಾಡಿ ಆ ಮೂಲಕ ಸುದ್ಧಿಯಾಗಿದ್ದಾರೆ.


ಹೌದು. ಶಾಸಕ ಪಿ. ರಾಜೀವ್ ರಾಯಬಾಗ ತಾಲೂಕಿನ ಕುಡಚಿ ಮತ ಕ್ಷೇತ್ರದ ಯಲ್ಪಾರಟ್ಟಿ ಗ್ರಾಮದಿಂದ ಪರಮಾನಂದವಾಡಿ ಗ್ರಾಮದ ರಸ್ತೆ ಕಾಮಗಾರಿ ವೀಕ್ಷಣೆಗೆ ಹೋಗಿ ಕಾರ್ಮಿಕನಂತೆ ಕಾಮಗಾರಿಯಲ್ಲಿ ಬಳಸುವ ಕಲ್ಲು ಒಡೆದಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.


ಅಲ್ಲದೇ ಮಧ್ಯಾಹ್ನ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಬಿಸಿಯೂಟ ಯೋಜನೆ ಪರಿಶೀಲನೆ ನಡೆಸಿದ್ದಾರೆ. ಶಾಸಕರ ಇಂತಹ ಕಾರ್ಯಗಳಿಗೆ ಕ್ಷೇತ್ರದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :