ಚಿಕ್ಕಮಗಳೂರು : ನೆರೆ ಸಂತ್ರಸ್ತರ ನೆರವಿಗೆ ಇಡೀ ರಾಜ್ಯದ ಜನತೆಯೇ ಸಹಾಯಹಸ್ತ ಚಾಚುತ್ತಿರುವಾಗ, ಸಹಾಯ ಕೇಳಿದ ಸಂತ್ರಸ್ತರ ಮೇಲೆ ಬಿಜೆಪಿ ಶಾಸಕರೊಬ್ಬರು ದರ್ಪ ತೋರಿದ ಘಟನೆ ನಡೆದಿದೆ. ಮಲೆನಾಡಿನಲ್ಲಿ ಸುರಿಯುತ್ತಿರುವ ಮಹಾಮಳೆಗೆ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಮುದುಗುಂಡಿ ಗ್ರಾಮವು ಕೂಡ ಮಹಾ ಮಳೆಗೆ ಮುಳುಗಿದ್ದು, ಜನ, ಜಾನುವಾರಗಳು ಪರದಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅಲ್ಲಿನ ಯುವಕನೊಬ್ಬ ಪ್ರವಾಹಕ್ಕೆ ಮನೆ ಕೊಚ್ಚಿ ಹೋಗಿದೆ, ಸಹಾಯ ಮಾಡಿ